ಅಂಜನಾಸುತನಿಗೆ ನಲವತ್ತು ನಮನಗಳು
(Hanuman Chalisa in Kannada)
by Mrs.S. Mangala
Satyan (ಎಸ್. ಮಂಗಳಾ ಸತ್ಯನ್)
Kannada
Novelist, 912, "Sree Ganesh", 5th Main, 1st Stage,
Aravindanagar,
Mysore-570023, Karnataka, India. (Ph.9448434550)
E-Mail: esmangala@gmail.com;
mangala_mys@yahoo.co.in
Website: http://esmangala.wix.com/mangala-1940;
http://mangalasatyan.tripod.com
*** *** ***
***
ಮಹಾಜ್ನಾನಿ
ಗುಣನಿಧಿ ವೀರ ಹನುಮಾ|
ಮೂರುಲೋಕದಲ್ಲೂ
ನೀನೆ ತೇಜೋ ಮಹಿಮಾ|
ನಿನ್ನಯಾ ಚರಣಕೆ ನನ್ನ
ನಮನವು |
ನಿನ್ನಯಾ ಚರಣಕೆ ನನ್ನ
ನಮನವು || ೧ ||
ಅಮಿತ ಪರಾಕ್ರಮಿ ನೀನೆ ರಾಮದೂತ |
ವಾಯುಪುತ್ರ
ನೀನೆ ಅಂಜನಾಸುತ |
ನಿನ್ನಯಾ ಚರಣಕೆ ನನ್ನ
ನಮನವು |
ನಿನ್ನಯಾ ಚರಣಕೆ ನನ್ನ
ನಮನವು || ೨ ||
ವಜ್ರಕಾಯ
ಹನುಮ ನೀನೆ ದುರುಳ ಶಿಕ್ಷಕ
|
ಸಜ್ಜನರ
ಬಂಧು ನೀನೆ ಶಿಷ್ಟ ರಕ್ಷಕ
|
ನಿನ್ನಯಾ ಚರಣಕೆ ನನ್ನ
ನಮನವು |
ನಿನ್ನಯಾ ಚರಣಕೆ ನನ್ನ
ನಮನವು || ೩ ||
ಕರ್ಣಕುಂಡಲಧಾರಿ
ಸ್ವರ್ಣಕಾಯನೆ |
ಸುರುಳಿಕೇಶ
ಸುಂದರಾ ವಾನರೇಶ |
ನಿನ್ನಯಾ ಚರಣಕೆ ನನ್ನ
ನಮನವು |
ನಿನ್ನಯಾ ಚರಣಕೆ ನನ್ನ
ನಮನವು || ೪ ||
ನಿನ್ನ ಕರಗಳೊಳಗೆ ಇಹುದು ವಜ್ರಧ್ವಜಗಳು |
ಉಡಿದಾರ
ಮೌಂಜಿಯಾ ಬ್ರಹ್ಮಚಾರಿಯು |
ನಿನ್ನಯಾ ಚರಣಕೆ ನನ್ನ
ನಮನವು |
ನಿನ್ನಯಾ ಚರಣಕೆ ನನ್ನ
ನಮನವು || ೫
||
ಸರ್ವ ಲೋಕ ವಂದಿತಾ ಕೇಸರೀಸುತ
|
ಸರ್ವ ಜನ ರಕ್ಷಕಾ ವೀರ
ನಾಯಕಾ |
ನಿನ್ನಯಾ ಚರಣಕೆ ನನ್ನ
ನಮನವು |
ನಿನ್ನಯಾ ಚರಣಕೆ ನನ್ನ
ನಮನವು || ೬ ||
ಸದಾ ಸಿದ್ಧ ಹಸ್ತ ನೀ
ರಾಮ ಸೇವಕಾ |
ಸಕಲ ಜ್ನಾನಿ ಗುಣಶೀಲ ಭಕ್ತಪಾಲಕಾ
|
ನಿನ್ನಯಾ ಚರಣಕೆ ನನ್ನ
ನಮನವು |
ನಿನ್ನಯಾ ಚರಣಕೆ ನನ್ನ
ನಮನವು || ೭
||
ರಾಮನಾಮ
ಆಲಿಸಲು ಸದಾ ನಿರತನು |
ನಿನ್ನ ಹೃದಯದಲ್ಲಿ ಇಹರು ಸೀತಾ ರಾಮರು
|
ನಿನ್ನಯಾ ಚರಣಕೆ ನನ್ನ
ನಮನವು |
ನಿನ್ನಯಾ ಚರಣಕೆ ನನ್ನ
ನಮನವು || ೮
||
ಸೀತೆಗಾಗಿ
ತೋರಿ ನೀನು ಸೂಕ್ಷ್ಮರೂಪವಾ |
ಲಂಕೆಯಲಿ
ತೋರಿ ನೀನು ಘೋರರೂಪವಾ |
ನಿನ್ನಯಾ ಚರಣಕೆ ನನ್ನ
ನಮನವು |
ನಿನ್ನಯಾ ಚರಣಕೆ ನನ್ನ
ನಮನವು || ೯
||
ರಾಮಕಾರ್ಯ
ಚತುರ ನೀ ಭೀಮಕಾಯನು |
ದೈತ್ಯ ಸಂಹಾರಿ ನೀನು ವೀರ
ಹನುಮನೆ |
ನಿನ್ನಯಾ ಚರಣಕೆ ನನ್ನ
ನಮನವು |
ನಿನ್ನಯಾ ಚರಣಕೆ ನನ್ನ
ನಮನವು || ೧೦
||
ಲಕ್ಷ್ಮಣನಾ
ಉಳಿಸಲೆಂದು ತಂದೆ ಮೂಲಿಕೆ |
ಪಾತ್ರನಾದೆ
ನೀನು ರಾಮನಂತರಾಳಕೆ |
ನಿನ್ನಯಾ ಚರಣಕೆ ನನ್ನ
ನಮನವು |
ನಿನ್ನಯಾ ಚರಣಕೆ ನನ್ನ
ನಮನವು || ೧೧
||
ನಿನ್ನ ಸೇವೆಯನ್ನು ಕಂಡು ರಾಮಚಂದ್ರನು |
ಭರತಗೆ ಸರಿಸಾಟಿ ಎಂದು ತಿಳಿದನು
|
ನಿನ್ನಯಾ ಚರಣಕೆ ನನ್ನ
ನಮನವು |
ನಿನ್ನಯಾ ಚರಣಕೆ ನನ್ನ
ನಮನವು || ೧೨ ||
ಹನುಮ ನಿನ್ನ ಪ್ರೇಮದಿಂದ ರಾಮ
ತೃಪ್ತನು |
ರಾಮ ಕೃಪೆಗೆ ಪಾತ್ರನಾದೆ ನೀನೆ
ಧನ್ಯನು |
ನಿನ್ನಯಾ ಚರಣಕೆ ನನ್ನ
ನಮನವು |
ನಿನ್ನಯಾ ಚರಣಕೆ ನನ್ನ
ನಮನವು || ೧೩ ||
ಬ್ರಹ್ಮಪುತ್ರ
ಆದಿಶೇಷ ಸನಕ ಮುನಿಗಳು |
ದೇವಗಣಗಳೆಲ್ಲ
ಸೇರಿ ಸ್ತುತಿಯ ಗೈದರು |
ನಿನ್ನಯಾ ಚರಣಕೆ ನನ್ನ
ನಮನವು |
ನಿನ್ನಯಾ ಚರಣಕೆ ನನ್ನ
ನಮನವು || ೧೪ ||
ವಾಯು ವರುಣ ಇಂದ್ರ ಅಗ್ನಿ
ಯಮ ಕುಬೇರರು |
ನಿನ್ನ ಮಹಿಮೆ ಹಾಡಿ ಹೊಗಳಿ
ಹರುಷಪಟ್ಟರು |
ನಿನ್ನಯಾ ಚರಣಕೆ ನನ್ನ
ನಮನವು |
ನಿನ್ನಯಾ ಚರಣಕೆ ನನ್ನ
ನಮನವು ||೧೫
||
ಸುಗ್ರೀವನಿಗೆ
ನೀನು ರಾಜ್ಯ ಕೊಡಿಸಿದೆ |
ರಾಮ ಸುಗ್ರೀವರಲಿ ನೀನು ಸ್ನೇಹ ಬೆಳೆಸಿದೆ
|
ನಿನ್ನಯಾ ಚರಣಕೆ ನನ್ನ
ನಮನವು |
ನಿನ್ನ್ನಯಾ ಚರಣಕೆ ನನ್ನ ನಮನವು || ೧೬
||
ನೀ ಮಾಡೆ ಉಪದೇಶವ ವಿಭೀಷಣನಿಗೆ
|
ರಾಮನಿಂದ
ಅರಸನಾದ ಅವನು ಲಂಕೆಗೆ |
ನಿನ್ನಯಾ ಚರಣಕೆ ನನ್ನ
ನಮನವು |
ನಿನ್ನಯಾ ಚರಣಕೆ ನನ್ನ
ನಮನವು || ೧೭ ||
ಸೂರ್ಯನನ್ನು
ಹಣ್ಣು ಎಂದು ನೀನು ತಿಳಿಯುತಾ
|
ಕ್ಷಣಮಾತ್ರದಿ
ಆಗಸಕ್ಕೆ ನೀನು ಹಾರಿದೆ |
ನಿನ್ನಯಾ ಚರಣಕೆ ನನ್ನ
ನಮನವು |
ನಿನ್ನಯಾ ಚರಣಕೆ ನನ್ನ
ನಮನವು || ೧೮
||
ರಾಮಮುದ್ರಿಕೆ
ಹಿಡಿದು ಜಲಧಿ ದಾಟಿದೆ |
ಲೀಲಾತೀತ
ಸ್ವಾಮಿ ನೀನು ಪರಮ ವೀರನೆ
|
ನಿನ್ನಯಾ ಚರಣಕೆ ನನ್ನ
ನಮನವು |
ನಿನ್ನಯಾ ಚರಣಕೆ ನನ್ನ
ನಮನವು || ೧೯ ||
ನಿನ್ನ ಕೃಪೆಯು ಒಂದೇ ಸಾಕು
ಇದ್ದರೆಮಗೆ |
ಸಕಲ ಕಾರ್ಯದಲ್ಲಿ ಸಿದ್ಧಿ ಹಲವು ಬಗೆಬಗೆ
|
ನಿನ್ನಯಾ ಚರಣಕೆ ನನ್ನ
ನಮನವು |
ನಿನ್ನಯಾ ಚರಣಕೆ ನನ್ನ
ನಮನವು || ೨೦
||
ದಾಸನಾದೆ
ಹನುಮ ನೀನು ರಾಮಚಂದ್ರಗೆ |
ಪ್ರಭುವ
ಕಾಣಬಹುದೆ ನೀನು ಕೃಪೆಯ ತೋರದೆ
|
ನಿನ್ನ್ನಯಾ ಚರಣಕೆ ನನ್ನ ನಮನವು
|
ನಿನ್ನಯಾ ಚರಣಕೆ ನನ್ನ
ನಮನವು || ೨೧ ||
ರಾಮಭಕ್ತ
ಹನುಮ ನೀನು, ನಿನಗೆ ಜಯ
ಜಯ |
ನೀನು ದಯವ ತೋರಲೆಮಗೆ ಇರುವುದೆ
ಭಯ |
ನಿನ್ನಯಾ ಚರಣಕೆ ನನ್ನ
ನಮನವು |
ನಿನ್ನಯಾ ಚರಣಕೆ ನನ್ನ
ನಮನವು || ೨೨ ||
ಅಮಿತ ಶೂರ ಧೀರ ನೀನು
ಪರಮಪವಿತ್ರ |
ಮೂರು ಲೋಕದಲ್ಲೂ ನೀನು ಪೂಜೆಗೆ ಪಾತ್ರ
|
ನಿನ್ನಯಾ ಚರಣಕೆ ನನ್ನ
ನಮನವು |
ನಿನ್ನಯಾ ಚರಣಕೆ ನನ್ನ
ನಮನವು || ೨೩ ||
ಶಕ್ತಿ ಯುಕ್ತಿ ಹನುಮ ನಿನ್ನ
ದಿವ್ಯ ನಾಮವು |
ಸ್ಮರಣೆಯಿಂದ
ಭೂತ ಪ್ರೇತ ಬಾಧೆ ಕಳೆವುದು
|
ನಿನ್ನಯಾ ಚರಣಕೆ ನನ್ನ
ನಮನವು |
ನಿನ್ನಯಾ ಚರಣಕೆ ನನ್ನ
ನಮನವು || ೨೪
||
ಪವನ ಸುತನೆ ನಿನ್ನ ನಾಮ
ರೋಗ ಕಳೆವುದು |
ಬಿಡದೆ ಜಪಿಸುತಿರಲು ಸರ್ವ ಪೀಡೆ ನಾಶವು
|
ನಿನ್ನಯಾ ಚರಣಕೆ ನನ್ನ
ನಮನವು |
ನಿನ್ನಯಾ ಚರಣಕೆ ನನ್ನ
ನಮನವು || ೨೫ ||
ಭಕ್ತಿಯಿಂದ
ಪೂಜಿಸುವವರ ಕಷ್ಟ ಕಳೆಯುವೆ |
ನಂಬಿದವರ
ಕೈಯ ಬಿಡದೆ ನೀನು ಸಲಹುವೆ
|
ನಿನ್ನಯಾ ಚರಣಕೆ ನನ್ನ
ನಮನವು |
ನಿನ್ನಯಾ ಚರಣಕೆ ನನ್ನ
ನಮನವು || ೨೬
||
ನಿನ್ನ ಸ್ವಾಮಿ ರಾಮಚಂದ್ರ ಸರ್ವ
ರಕ್ಷಕ |
ಅವನ ದಾಸ ಹನುಮ ನೀನು
ಭಕ್ತ ಪಾಲಕ |
ನಿನ್ನಯಾ ಚರಣಕೆ ನನ್ನ
ನಮನವು |
ನಿನ್ನಯಾ ಚರಣಕೆ ನನ್ನ
ನಮನವು || ೨೭ ||
ಕೋರುವವಗೆ
ವರವ ಕೊಡುವ ದಯಾಸಾಗರ |
ನಂಬಿದವರ
ಬಾಳಿಗೆ ನೀನೇ ಆಧಾರ |
ನಿನ್ನಯಾ ಚರಣಕೆ ನನ್ನ
ನಮನವು |
ನಿನ್ನಯಾ ಚರಣಕೆ ನನ್ನ
ನಮನವು || ೨೮ ||
ಯುಗ ಯುಗದಲೂ ತುಂಬಿಹುದು ನಿನ್ನ
ಕೀರುತಿ |
ಜಗದೊಳೆಲ್ಲ
ಕಾಣುತಿಹುದು ನಿನ್ನ ಮೂರುತಿ |
ನಿನ್ನಯಾ ಚರಣಕೆ ನನ್ನ
ನಮನವು |
ನಿನ್ನಯಾ ಚರಣಕೆ ನನ್ನ
ನಮನವು || ೨೯ ||
ಶಿಷ್ಟ ರಕ್ಷಕನು ನೀನು ದುಷ್ಟ
ಶಿಕ್ಷಕ |
ರಾಮನಿಗೆ
ಪ್ರೀತಿಪಾತ್ರ ಹನುಮ ನಾಯಕ |
ನಿನ್ನಯಾ ಚರಣಕೆ ನನ್ನ
ನಮನವು |
ನಿನ್ನಯಾ ಚರಣಕೆ ನನ್ನ
ನಮನವು || ೩೦ ||
ಸೀತೆ ಒಲಿದು ನಿನಗೆ ಇತ್ತ
ಸಕಲ ಸಿದ್ಧಿಯಾ |
ನಿನ್ನ ನಂಬಿದವರಿಗೆಲ್ಲ ನೀನು ನೀಡಿದೆ |
ನಿನ್ನಯಾ ಚರಣಕೆ ನನ್ನ
ನಮನವು |
ನಿನ್ನ್ನಯಾ ಚರಣಕೆ ನನ್ನ ನಮನವು
|| ೩೧ ||
ಹಗಲು ರಾತ್ರಿ ಹನುಮ ನಿನಗೆ
ರಾಮಧ್ಯಾನವು |
ಕರುಣಿಸೆಮಗೆ
ಹನುಮ ನೀನು ಮಧುರನಾಮವ |
ನಿನ್ನಯಾ ಚರಣಕೆ ನನ್ನ
ನಮನವು |
ನಿನ್ನಯಾ ಚರಣಕೆ ನನ್ನ
ನಮನವು || ೩೨ ||
ನಿನ್ನ ನಾವು ಪೂಜಿಸಿದರೆ ರಾಮನೊಲಿವನು
|
ಕರುಣೆಯಿಂದ
ಅವನು ನಮ್ಮ ಪಾಪ ಕಳೆವನು
|
ನಿನ್ನಯಾ ಚರಣಕೆ ನನ್ನ
ನಮನವು |
ನಿನ್ನಯಾ ಚರಣಕೆ ನನ್ನ
ನಮನವು || ೩೩ ||
ಜನುಮ ಜನುಮದಲ್ಲಿ ಮೋಕ್ಷಪಡೆದ ಭಕ್ತರು |
ಸಲಹೆ ನೀನು ಆಗುವರು ರಾಮಭಕ್ತರು
|
ನಿನ್ನಯಾ ಚರಣಕೆ ನನ್ನ
ನಮನವು |
ನಿನ್ನಯಾ ಚರಣಕೆ ನನ್ನ
ನಮನವು || ೩೪ ||
ಬೇಡ ಬೇಡ ಎಮಗೆ ಅನ್ಯ
ದೈವದ ಚಿಂತೆ |
ನೀನು ನಮಗೆ ಕರುಣೆ ತೋರೆ
ಏತಕೆ ಚಿಂತೆ |
ನಿನ್ನಯಾ ಚರಣಕೆ ನನ್ನ
ನಮನವು |
ನಿನ್ನಯಾ ಚರಣಕೆ ನನ್ನ
ನಮನವು || ೩೫ ||
ಹನುಮ ನೀನು ನಂಬಿದವರ ಕಷ್ಟ
ಕಳೆಯುವೆ |
ಕೋರಿದುದನು
ನೀಡಿ ನೀನು ಪೀಡೆ ಹರಿಸುವೆ
|
ನಿನ್ನಯಾ ಚರಣಕೆ ನನ್ನ
ನಮನವು |
ನಿನ್ನಯಾ ಚರಣಕೆ ನನ್ನ
ನಮನವು || ೩೬ ||
ಧೀರ ನೀನು, ಶೂರ ನೀನು,
ರಾಮನ ದೂತ |
ಕೃಪೆಯ ಮಾಡಿ ಕರುಣೆ ತೋರು
ಅಂಜನಾಸುತ |
ನಿನ್ನಯಾ ಚರಣಕೆ ನನ್ನ
ನಮನವು |
ನಿನ್ನಯಾ ಚರಣಕೆ ನನ್ನ
ನಮನವು || ೩೭ ||
ನೂರು, ಮತ್ತೊಂದು ಬಾರಿ ಪಠಿಸೆ ಸ್ತೋತ್ರವ
|
ಅವರಿಗೆಲ್ಲ
ಕೊಡುವೆ ನೀನು ಪರಮ ಮೋಕ್ಷವ
|
ನಿನ್ನಯಾ ಚರಣಕೆ ನನ್ನ
ನಮನವು |
ನಿನ್ನಯಾ ಚರಣಕೆ ನನ್ನ
ನಮನವು || ೩೮ ||
ನಿನ್ನ ಸ್ತೋತ್ರ ಹೇಳುವವಗೆ ಸಿದ್ಧಿ
ಖಚಿತವು |
ಸಾಕ್ಷಿ
ಇಹುದು ಕೇಳು ಇದಕೆ ಹರನ
ವಚನವು |
ನಿನ್ನಯಾ ಚರಣಕೆ ನನ್ನ
ನಮನವು |
ನಿನ್ನಯಾ ಚರಣಕೆ ನನ್ನ
ನಮನವು || ೩೯ ||
ಹರಿಯದಾಸ
ತುಳಸಿದಾಸ ಇದನು ರಚಿಸಿದ |
ಅವನ ಹೃದಯ ಮಂದಿರದಲ್ಲಿ ನಿನ್ನಯ
ವಾಸ |
ನಿನ್ನಯಾ ಚರಣಕೆ ನನ್ನ
ನಮನವು |
ನಿನ್ನಯಾ ಚರಣಕೆ ನನ್ನ
ನಮನವು || ೪೦ ||
ಬರೆದ ಗೋಸ್ವಾಮಿ ಇದನು ಎರಡು ವಿಂಶತಿ
|
ಇದನು ಪಠಣ ಮಾಡಿದಾಗ ಶೋಕ
ಅವನತಿ |
ನಿನ್ನಯಾ ಚರಣಕೆ ನನ್ನ
ನಮನವು |
ನಿನ್ನಯಾ ಚರಣಕೆ ನನ್ನ
ನಮನವು || ೪೧ ||
ಹನುಮ ನಿನ್ನ ಸ್ತುತಿಯ ಮಾಡೆ
ಹರಿಯು ಒಲಿವನು |
ಸಾಡೆಸಾತಿ
ಎಲ್ಲ ದೋಷ ಅವನು ಕಳೆವನು
|
ನಿನ್ನಯಾ ಚರಣಕೆ ನನ್ನ
ನಮನವು |
ನಿನ್ನಯಾ ಚರಣಕೆ ನನ್ನ
ನಮನವು || ೪೨ ||
ಹನುಮ ನಾನು ಬರೆದೆನಿದನು ತಾಯಿನುಡಿಯಲಿ
|
ನಿನ್ನ ಸ್ತೋತ್ರ, ನಿನ್ನ ಭಾಷೆ, ನಿನಗೆ
ಅರ್ಪಣೆ |
ನಿನ್ನಯಾ ಚರಣಕೆ ನನ್ನ
ನಮನವು |
ನಿನ್ನಯಾ ಚರಣಕೆ ನನ್ನ
ನಮನವು || ೪೩ ||
= "ಸತ್ಯ"
ನಿತ್ಯ, ಹನುಮ ನಮ್ಮ ಕಷ್ಟಕೆ
ಅಂತ್ಯ|
"ಸತ್ಯ" ದಲ್ಲಿ ನಡೆವರ ಬಾಳ್
"ಮಂಗಳ" ನಿತ್ಯ ||
No comments:
Post a Comment