““STHREE KALA SHAKTHI” AWARDS PRESENTATION AND PRIZE DISTRIBUTION TO WINNERS OF 2009 DASARA DOLLS AND GARDEN SHOW WINNERS” created on 27 February, 2010 @ 19:12 [Autosave]
Title "STHREE KALA SHAKTHI" AWARDS PRESENTATION AND PRIZE DISTRIBUTION TO WINNERS OF 2009 DASARA DOLLS AND GARDEN SHOW WINNERS
"STHREE KALA SHAKTHI" AWARDS PRESENTATION AND PRIZE DISTRIBUTION TO WINNERS OF 2009 DASARA DOLLS AND GARDEN SHOW WINNERS
Content

STHREE SHAKTHI MAHILA PRATHISHTANA TRUST

Sthree Shakthi S. MANGALA SATYAN
ಸ್ತ್ರೀಶಕ್ತಿ ಮಹಿಳಾ ಪ್ರತಿಷ್ಠಾನವು, ಕಳೆದ ವರ್ಷಗಳಂತೆಯೇ ಈ ಬಾರಿಯೂ ಮಹಿಳೆಯರಿಗಾಗಿ ೨೦೦೯ ರ ದಸರಾ ಮಹೋತ್ಸವದ ಸಂದರ್ಭದಲ್ಲಿ "ಬೋಂಬೆ ಪ್ರದರ್ಶನ"ಮತ್ತು "ಮನೆ ತೊಟದ ಪ್ರದರ್ಶನ" ಸ್ಪರ್ಧೆಯನ್ನು ಹಮ್ಮಿಕೊ೦ಡಿತ್ತು. ಕಳೆದ ವರ್ಷಗಳಿಗಿಂತಲೂ, ಈ ಬಾರಿ ಹೆಚ್ಚು ಮಂದಿ ಮಹಿಳೆಯರು ಉತ್ಸಾಹದಿಂದ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಪ್ರವೇಶಾರ್ಥಿಗಳ ಸಂಖ್ಯೆ ೪೨ ನ್ನು ಮುಟ್ಟಿತ್ತು. ಪ್ರತಿಷ್ಠಾನದ ಅಧ್ಯಕ್ಷರಾದ ಸ್ತ್ರೀಶಕ್ತಿ ಏಸ್ ಮಂಗಳಾ ಸತ್ಯನ ಅವರ ಅಧ್ಯಕ್ಷತೆಯಲ್ಲಿ, ಸ್ತ್ರೀಶಕ್ತಿ ವಾಣಿ ಸುಬ್ಬಯ್ಯ, ಶ್ರೀ ರಾಮಕೃಷ್ಣ ರಾಜಗೊಪಾಲ ಹಾಗೂ ಸ್ತ್ರೀಶಕ್ತಿ ಡಾ। ಮಂದಾರ ಮಹಾರಿಷಿ ಅವರನ್ನೊಳಗೊಳಗೊ೦ಡ ತೀರ್ಪುಗಾರ ಮಂಡಳಿಯು ಮೂರು ದಿನಗಳ ಕಾಲ ನಗರದ ವಿವಿಧ ಬಡಾವಣೆಗಳಲ್ಲಿದ್ದ ಸ್ಪರ್ಧಾ ಸ್ಥಳಗಳಿಗೆ ಭೇಟಿಯಿತ್ತು, ಪ್ರಶಸ್ತಿ ಹಾಗೂ ಬಹುಮಾನಗಳಿಗೆ ವಿಜೆತರನ್ನು ಆಯ್ಕೆ ಮಾಡಿತ್ತು. ವಿಜೇತರ ಹೆಸರುಗಳನ್ನು ಇದೆ ವೆಬ್ ಸೈಟ್ ನಲ್ಲಿ ಈ ಹಿಂದೆಯೇ ಪ್ರಕಟಿಸಲಾಗಿತ್ತು
ಸ್ತ್ರೀಶಕ್ತಿ ಮಹಿಳಾ ಪ್ರತಿಷ್ಠಾನವು, ಬೋಂಬೆ ಸ್ಪರ್ಧೇ ಮತ್ತು ಮನೆ ತೊಟದ ಪ್ರದರ್ಶನ ಸ್ಪರ್ಧೆಯಲ್ಲಿ ಪ್ರಶಸ್ತಿ ಹಾಗೂ ಬಶುಮಾನಗಳನ್ನು ಗಳಿಸಿದವರನ್ನು ಅಭಿನಂದಿಸಿ ಪುರಸ್ಕರಿಸುವ ಸಮಾರಂಭವನ್ನು ೨೦೧೦ ರ ಜನವರಿ ೧೦, ಭಾನುವಾರ ಮೈಸೂರಿನ ಕುವೆಂಪುನಗರದ ಆದಿಉಂಅನಗಿರಿ ರಸ್ತೇಯಲ್ಲಿರುವ ವೀಣೆ ಶೇಷಣ್ಣ ಭವನ ("ಗಾನಭಾರತಿ") ದಲ್ಲಿ ಹಮ್ಮಿಕೊ೦ಡಿತ್ತು. ಮುಖ್ಯ ಅತಿಥಿಗಳಾಗಿ ನಮ್ಮ ಆಹ್ವಾನವನ್ನು ಮನ್ನಿಸಿ, ಸಮಾರಂಭವನ್ನು ಉದ್ಘಾಟಿಸಲು ಮೈಸೂರಿನ ಕೇಂದ್ರ ಆಹಾರ ಸಂಶೋಧನಾಲಯದ ನಿರ್ದೇಶಕರಾದ ಸನ್ಮಾನ್ಯ ಡಾ। "ಪದ್ಮಶ್ರೀ" ವಿಜೇತರಾದ ವಿ. ಪ್ರಕಾಶ ರವರು ಆಗಮಿಸಿದ್ದರು. ಇವರೊ೦ದಿಗೆ ಮುಖ್ಯ ಅತಿಥಿಗಳಾಗಿ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ ನ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಮಡ್ಡೀಕೆರೆ ಗೊಪಾಲ್, ಅಖಿಲ ಕರ್ನಾಟ ಬ್ರಾಹ್ಮಣ ಮಹಾಸಭಾದ ಹಿರಿಯ ಉಪಾಧ್ಯಕ್ಷರೂ, ಸ್ತ್ರೀಶಕ್ತಿ ಮಹಿಳಾ ಪ್ರತಿಷ್ಠಾನದ ಪೋಷಕರೂ ಆದ ಸನ್ಮಾನ್ಯ ಶ್ರೀ ಕೆ. ರಘುರಾಮ್, ಮತ್ತು ಮೇಲುಕೋಟೆಯ ಮಹಾ ಸುದರ್ಶನ ಉಪಾಸಕರಾದ ಸನ್ಮಾನ್ಯ ಶ್ರೀ ಇಳೈ ಆಳ್ವಾರ ಮಹಾಸ್ವಾಮೀಜಿ ಅವರೂ ಆಗಮಿಸಿ ಸಮಾರಂಭದ ಯಶಸ್ಸಿಗೆ ಕಾರಣರಾದರು.
ಈ ಪ್ರಶಸ್ತಿ ಪ್ರದಾನ ಸಮಾರಂಭದ ಸಂದರ್ಭದಲ್ಲಿ, ನಗರದ ರಾಜಶೇಖರ ಮೇಡಿಕಲ್ ಫೌಂಡೇಶನ ನ ನಿರ್ದೇಶಕರೂ, ಸಾಹಿತ್ಯ ಹಾಗೂ ಕಲಾಭಿಮಾನಿಗಳೂ ಆದ ಡಾ। ಹೆಚ್ ಬಿ. ರಾಜಶೇಖರ - ಕವಯಿತ್ರಿ ಡಾ। ಸ್ತ್ರೀಶಕ್ತಿ ಲತಾ ರಾಜಶೇಖರ ದಂಪತಿಗಳು, ಪ್ರತಿಷ್ಠಾನದ ಅಂದಿನ ಸಮಾರಂಭಕ್ಕೆ ನೆರವಾಗಿ ಸಹಕರಿಸಿದ ಶ್ರೀ ರಘುನಂದನ್ (+ ಸ್ತ್ರೀಶಕ್ತಿ ಸುಮನಾ ರಘುನಂದನ್) ದಂಪತಿಗಳು, ಪ್ರೊ। ಏಂ. ಏನ್ ಗೊಪಾಲನ (+ ಸ್ತ್ರೀಶಕ್ತಿ ಯದುಗಿರಿ ಗೋಪಾಲನ ) ದಂಪತಿಗಳು ಮತ್ತು ಶ್ರೀ ಕುಮಾರಸ್ವಾಮಿ (+ ಸ್ತ್ರೀಶಕ್ತಿ ಹೇಮಲತಾ ಕುಮಾರಸ್ವಾಮಿ) ದಂಪತಿಗಳನ್ನು ಪ್ರತಿಷ್ಠಾನವು ಆದರಿಸಿ ಅಭಿವಂದಿಸಿತು.

ಪ್ರತಿ ವರ್ಷದಂತೆಯೇ ಈ ಬಾರಿಯೂ ಜೀವಮಾನ ಸಾಧನೆ ಪ್ರಶಸ್ತಿಯನ್ನು ನಗರದ ಖ್ಯಾತ ಸುಗಮ ಸಂಗೀತ ಗಾಯಕಿ ಸ್ತ್ರೀಶಕ್ತಿ ಶಾಂತಾ ಜಗದೀಶ ಅವರನ್ನು "ಸ್ತ್ರೀ ಗಾಯನ ಗಂಗೆ" ಪ್ರಶಸ್ತಿ ನೀಡಿ ಪುರಸ್ಕರಿಸಿದ ಸ್ತ್ರೀಶಕ್ತಿ ಮಹಿಳಾ ಪ್ರತಿಷ್ಠಾನವು, ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಗೈದಿರುವ ಸ್ತ್ರೀಶಕ್ತಿ ಶಾಮಲಾ ಮೂರ್ತಿ ಅವರಿಗೆ "ಸ್ತ್ರೀ ಸಾಹಿತ್ಯ ಶಕ್ತಿ" ಪ್ರಶಸ್ತಿ ನೀಡಿ ಪುರಸ್ಕರಿಸಿತು.
ಪ್ರತಿಷ್ಠಾನದ ಸಂಪ್ರದಾಯದಂತೆ, ಏಲ್ಲ ಸಮಾರಂಭಗಳಲ್ಲೂ ಪಾಲಿಸಿಕೊ೦ಡು ಬಂದಿರುವ ನಿಯಮದಂತೆ, ಹಾಜರಿದ್ದ ಸದಸ್ಯರ ಸದಸ್ಯತ್ವ ಸಂಖ್ಯೆಗಳ ಚೀಟಿಗಳನ್ನು "ಲಕ್ಕೀ ಡಿಪ" ಮಾರ್ಗವನ್ನು ಅನುಸರಿಸಿ ದಿನಾಂಕ ಜನವರಿ ೧೦ ರ ಸಮಾರಂಭಕ್ಕೂ ಸ್ತ್ರೀಶಕ್ತಿ ಪ್ರಸನ್ನ ಕುಮಾರಿ ಅವರನ್ನು "ತವರಿನ ಅತಿಥಿ" ಯಾಗಿ ಆರಿಸಿ, ವೇದಿಕೆಗ ಆಹ್ವಾನಿಸಿ, ಇತರ ಮುಖ್ಯ ಅತಿಥಿಗಳೊ೦ದಿಗೆ ಗೌರವಿಸಲಾಯಿತು. ಇಲ್ಲಿಂದ ಮುಂದೆ, ಸಮಾರಂಭದ ಸಚಿತ್ರ ವರದಿಯನ್ನು ನೀಡಲಾಗುವುದು.
ಅಧ್ಯಕ್ಷರ ಪ್ರಾಸ್ತಾವಿಕ ನುಡಿಃ

ದಿನದ ಕಾರ್ಯಕ್ರಮದ ಆರಂಭದಲ್ಲಿ, ಪ್ರತಿಷ್ಠಾನದ ಅಧ್ಯಕ್ಷರಾದ ಸ್ತ್ರೀಶಕ್ತಿ ಏಸ್ ಮಂಗಳಾ ಸತ್ಯನ ಅವರು ಔಪಚಾರಿಕವಾಗಿ ಹಾಜರಿದ್ದ ಏಲ್ಲ ಅಭಿಮಾನಿಗಳನ್ನೂ ಸಮಾರಂಭಕ್ಕ ಸ್ವಾಗತಿಸುತ್ತಾ, ಸ್ತ್ರೀಶಕ್ತಿ ಮಹಿಳಾ ಪ್ರತಿಷ್ಠಾನವು ಹಮ್ಮಿಕೊ೦ಡಿರುವ ಕಾರ್ಯಚಟುವಟಿಕೆಗಳು, ಧ್ಯೇಯೋದ್ದೇಶಗಳು, ಹಾಗೂ ಅಂದಿನ ಸಮಾರಂಭಕ್ಕೆ ಅರ್ಥಿಕವಾಗಿ ನೆರವಾದ ಏಲ್ಲ ಹಿತಚಿಂತಕರು, ಅಭಿಮಾನಿಗಳು, ಸ್ತ್ರೀಶಕ್ತಿಗಳನ್ನು ಸ್ಮರಿಸುತ್ತಾ, ಇದೇ ರೀತಿ ಮುಂದೆಯೂ ಏಲ್ಲರೂ ಮುಕ್ತ ಹಸ್ತದಿಂದ ಪ್ರತಿಷ್ಠಾನದ ಕಾರ್ಯಚಟುವಟಿಕೇಗಳು ನಿರಂತರವಾಗಿ ನಡೆಯಲು ಸಹಕರಿಸುವಂತೆ ಮನವಿ ಮಾಡಿದರು. ಅಧ್ಯಕ್ಷರು ಮುಂದುವರಿದು ಸ್ತ್ರೀಶಕ್ತಿ ಏ. ಏಸ್ ವಾಣಿ ಸುಬ್ಬಯ್ಯ ಅವರನ್ನು ವೇದಿಕಗೆ ಆಹ್ವಾನಿಸಿ ದಿನದ ನಂತರದ ಕಾರ್ಯಕ್ರಮಗಳ ನಿರೂಪಣೆಯ ಹೋಣೆಯನ್ನು ಅವರಿಗೆ ವಹಿಸಿಕೊಟ್ಟರು.
ನಿರೂಪಕಿ ಸ್ತ್ರೀಶಕ್ತಿ ಏ. ಏಸ್ ವಾಣಿ ಸುಬ್ಬಯ್ಯಃ

ನಿರೂಪಕಿ ಸ್ತ್ರೀಶಕ್ತಿ ವಾಣಿ ಸುಬ್ಬಯ್ಯ ಅವರು ಸಭೆಗೆ ವಂದಿಸಿ, ಕಾರ್ಯಕ್ರಮದ ಪ್ರಥಮ ಅಂಗವಾದ "ನಾಡಗೀತೆ" ಗಾಯನ ಹಾಗೂ ಪ್ರಾರ್ಥನೆ ಗೆ ಖ್ಯಾತ ಸುಗಮ ಸಂಗೀತ ಗಾಯಕಿ ಸ್ತ್ರೀಶಕ್ತಿ ಶಾಂತಾ ಜಗದೀಶ ಅವರನ್ನು ವೇದಿಕೆಗೆ ಆಹ್ವಾನಿಸಿದರು.

"ನಾಡ ಗೀತೆ" ಗಾಯನ ಹಾಗೂ ಪ್ರಾರ್ಥನೆಃ
ಸ್ತ್ರೀಶಕ್ತಿ ಶಾಂತಾ ಜಗದೀಶ ಅವರಿಂದ "ನಾಡಗೀತೆ" ಗಾಯನ
ಪ್ರಾರ್ಥನೆ
"ನಾಡಗೀತೆ" ಗಾಯನ ಹಾರ್ಗೂ ಪ್ರಾರ್ಥನೆಯನ್ನು ಸಲ್ಲಿಸಿದ ಸ್ತ್ರೀಶಕ್ತಿ ಶಾಂತಾ ಜಗದೀಶ ಅವರಿಗೆ ವಂದನೆಯನ್ನು ತಿಳಿಸಿ, ನಿರೂಪಕರಾದ ವಾಣಿ ಸುಬ್ಬಯ್ಯ ಅವರು ಅತಿಥಿಗಳಾಗಿ ಆಗಮಿಸಿದ್ದ ಗಣ್ಯರನ್ನು ವೇದಿಕೆಗೆ ಆಹ್ವಾನಿಸಿದರು. "ಪದ್ಮಶ್ರೀ" ಡಾ। ವಿ. ಪ್ರಕಾಶ್, ಶ್ರೀ ಇಳೈ ಆಳ್ವಾರ ಮಹಾಸ್ವಾಮೀಜಿ, ಶ್ರೀ ಕೆ. ರಘುರಾಮ ಹಾಗೂ ಶ್ರೀ ಮಡ್ಡೀಕೆರೆ ಗೊಪಾಲ ಅವರುಗಳು ಪ್ರತಿಷ್ಠಾನದ ಅಧ್ಯಕ್ಷರಾದ ಸ್ತ್ರೀಶಕ್ತಿ ಏಸ್ ಮಂಗಳಾ ಸತ್ತ್ಯನ ಅವರೊ೦ದಿಗೆ ವೇದಿಕೆಗೆ ಆಗಮಿಸಿ, ಆಸೀನರಾದರು.
ಗೌರವಾನ್ವಿತ ಮುಖ್ಯ ಅತಿಥಿಗಳುಃ

ಚಿತ್ರದಲ್ಲಿ ಏಡದಿಂದ ಬಲಕ್ಕೆಃ ಸ್ತ್ರೀಶಕ್ತಿ ಏಸ್ ಮಂಗಳಾ ಸತ್ಯನ (ಅಧ್ಯಕ್ಷರು); ಶ್ರೀ ಮಡ್ಡೀಕೆರೆ ಗೋಪಾಲ (ಮುಖ್ಯ ಅತಿಥಿಗಳು); "ಪದ್ಮಶ್ರೀ" ಡಾ। ವಿ. ಪ್ರಕಾಶ (ಮುಖ್ಯ ಅತಿಥಿಗಳು ಮತ್ತು ಉದ್ಘಾಟಕರು); ಶ್ರೀ ಇಳೈ ಆಳ್ವಾರ ಸ್ವಾಮೀಜಿ (ಮುಖ್ಯ ಅತಿಥಿಗಳು) ಮತ್ತು ಶ್ರೀ ಕೆ. ರಘುರಾಮ (ಮುಖ್ಯ ಅತಿಥಿಗಳು. ತವರಿನ ಅತಿಥಿ ಆಯ್ಕೆಃ ಸ್ತ್ರೀಶಕ್ತಿ ಮಹಿಳಾ ಪ್ರತಿಷ್ಠಾನವು ಆರಂಭದಿಂದಲೂ ಅನುಸರಿಸಿಕೊ೦ಡು ಬಂದಿರುವ ಪದ್ಧತಿಯಂತೆ, ಅಂದಿನ ಸಮಾರಂಭದಲ್ಲಿ ಹಾಜರಿದ್ದ ಸದಸ್ಯರ ("ಸ್ತ್ರೀಶಕ್ತಿ" ಗಳು) ಸದಸ್ಯತ್ವ ಸಂಖ್ಯೆಯನ್ನೊಳಗೊ೦ಡ ಚೀಟಿಗಳನ್ನು "ಲಕ್ಕೀ ಡಿಪ್" ಮೂಲಕ ಮುಖ್ಯ ಅತಿಥಿಗಳಾದ ಡಾ। ವಿ. ಪ್ರಕಾಶ ಅವರು ಆರಿಸಿದ "ತವರಿನ ಅತಿಥಿ" ಯೇ ಸ್ತ್ರೀಶಕ್ತಿ ಪ್ರಸನ್ನ ಕುಮಾರಿ. ಹೀಗೇ ಆಯ್ಕೆಗೊ೦ಡ ಸ್ತ್ರೀಶಕ್ತಿ ಪ್ರಸನ್ನ ಕುಮಾರಿ ಅವರನ್ನು ವೇದಿಕೆಗೆ ಆಹ್ವಾನಿಸಲಾಯಿತು.

ಆಹ್ವಾನಿತ ಗಣ್ಯರು ಹಾಗೂ ಅಧ್ಯಕ್ಷರೊ೦ದಿಗೆ, "ತವರಿನ ಅತಿಥಿ" ಯಾಗಿ ಆಯ್ಕೆಗೊ೦ಡ ಸ್ತ್ರೀಶಕ್ತಿ ಪ್ರಸನ್ನ ಕುಮಾರಿ. ಉದ್ಘಾಟನೆ ಸಮಾರಂಭ (ಸಭಾ ಕಾರ್ಯಕ್ರಮ)ಃ ಗೌರವಾನ್ವಿತ ಮುಖ್ಯ ಅತಿಥಿಗಳಾದ ಸನ್ಮಾನ್ಯ ಡಾ। ("ಪದ್ಮಶ್ರೀ") ಪ್ರಕಾಶ್ ಅವರು ಜ್ಯೋತಿ ಬೇಳಗುವುದರ ಮೂಲಕ ದಿನದ ಸಮಾರಂಭಕ್ಕೆ ಚಾಲನೆ ನೀಡಿದರು. ಸನ್ಮಾನ್ಯ ಶ್ರೀ ಮಡ್ಡೀಕೆರೆ ಗೋಪಾಲ್, ಪೂಜ್ಯರಾದ ಶ್ರೀ ಇಳೈ ಆಳ್ವಾರ ಸ್ವಾಮೀಜಿ, ಸನ್ಮಾನ್ಯ ಶ್ರೀ ಕೆ. ರಘುರಾಮ್, ಪ್ರತಿಷ್ಠಾನದ ಅಧ್ಯಕ್ಷರಾದ ಸ್ತ್ರೀಶಕ್ತಿ ಏಸ್ ಮಂಗಳಾ ಸತ್ಯನ ಹಾಗೂ "ತವರಿನ ಅತಿಥಿ" ಸ್ತ್ರೀಶಕ್ತಿ ಪ್ರಸನ್ನ ಕುಮಾರಿ ಅವರುಗಳು ಉದ್ಘಾಟನಾ ಕಾರ್ಯದಲ್ಲಿ, ಡಾ। ಪ್ರಕಾಶ ಅವರೊ೦ದಿಗೆ ಕೈ ಜೋಡಿಸಿದರು.
"ಸ್ತ್ರೀ ಕಲಾ ಶಕ್ತಿ" ಪ್ರಶಸ್ತಿ ಪ್ರದಾನಃ ಸ್ತ್ರೀಶಕ್ತಿ ದಸರಾ ಬೊ೦ಬೆ ಪ್ರದರ್ಶನ ವಿಭಾಗ


ಸ್ತ್ರೀಶಕ್ತಿ ಕೆ. ಏಸ್ ರೇವತಿ ರಾಮಸ್ವಾಮಿ ಅವರಿಗೇ ಬೋಂಬೆ ಪ್ರದರ್ಶನದಲ್ಲಿ ಉತ್ತಮ ಸಾಧನೆಗಾಗಿ "ಸ್ತ್ರೀ ಸ್ವರ್ಣ ಕಲಾ ಶಕ್ತಿ" ಪ್ರಶಸ್ತಿ ಪ್ರದಾನ ಮಾಡಿ ಅಭಿನಂದಿಸಲಾಯಿತು.


ಸ್ತ್ರೀಶಕ್ತಿ ಜಿ. ಆರ್ ಜಯಶ್ರೀ ಆವರಿಗೆ ಬೋಂಬೆ ಪ್ರದರ್ಶನದಲ್ಲಿ ಉತ್ತಮ ಸಾಧನೇಗಾಗಿ "ಸ್ತ್ರೀ ರಜತ ಕಲಾ ಶಕ್ತಿ" ಪ್ರಶಸ್ತಿ ಪ್ರದಾನ ಮಾಡಿ ಅಭಿನಂದಿಸಲಾಯಿತು.


ಶ್ರೀಮತಿ ಆಶಾ ವೆಂಕಟೇಶ ಅವರಿಗೆ ಬೋಂಬೆ ಪ್ರದರ್ಶನದಲ್ಲಿ ಉತ್ತಮ ಸಾಧನೆಗಾಗಿ "ಸ್ತ್ರೀ ರಜತ ಕಲಾ ಶಕ್ತಿ" ಪ್ರಶಸ್ತಿ ಪ್ರದಾನ ಮಾಡಿ ಅಭಿನಂದಿಸಲಾಯಿತು.



ಶ್ರೀಮತಿ ಸುಧಾ ಸಿದ್ದೇಗೌಡ ಅವರಿಗೆ ಮನೆ ತೋಟದ ಪ್ರದರ್ಶನದಲ್ಲಿ ಉತ್ತಮ ಸಾಧನೇಗಾಗಿ "ಸ್ತ್ರೀ ರಜತ ಕಲಾ ಶಕ್ತಿ" ಪ್ರಶಸ್ತಿ ಪ್ರದಾನ ಮಾಡಿ ಅಭಿನಂದಿಸಲಾಯಿತು.


ಶ್ರೀಮತಿ ಜಗದಂಬಾ ನಾಗರಾಜ ಅವರಿಗೆ ಮನೆ ತೊಟದ ಪ್ರದರ್ಶನದಲ್ಲಿ ಉತ್ತಮ ಸಾಧನೇಗಾಗಿ "ಸ್ತ್ರೀ ಸ್ವರ್ಣ ಕಲಾ ಶಕ್ತಿ" ಪ್ರಶಸ್ತಿ ಪ್ರದಾನ ಮಾಡಿ ಅಭಿನಂದಿಸಲಾಯಿತು.
ಸ್ತ್ರೀ ಕಲಾ ಶಕ್ತಿ ಪ್ರಶಸ್ತಿ "ಬೋನಸ್ ಬಹುಮಾನಃ ಸ್ತ್ರೀಶಕ್ತಿ ಮಹಿಳಾ ಪ್ರತಿಷ್ಠಾನವು ಹಮ್ಮಿಕೋಳ್ಳುವ ಸ್ಪರ್ಧೆಗಳಲ್ಲಿ ಭಾಗವಹಿಸುವ ಸ್ಪರ್ಧಿಗಳಲ್ಲಿ, ಸ್ಪರ್ಧಿಯು ಗಳಿಸುವ ಬಹುಮಾನಗಳ ಸಂಖ್ಯೆ ಹತ್ತನ್ನು ಮುಟ್ಟಿದರೆ, ಅಂತಹ ವಿಜೇತರಿಗೆ ಬೊನಸ ಬಹುಮಾನವೊ೦ದನ್ನೂ ನೀಡಲಾಗುವುದು. ಹಾಗೇಯೇ, ದಸರ ಬೊ೦ಬೆ ಪ್ರದರ್ಶನ ಮತ್ತು ಮನೆ ತೊಟದ ಪ್ರದರ್ಶನ ಸ್ಪರ್ಧೆಗಳಲ್ಲಿ "ಸ್ತ್ರೀ ಕಲಾ ಶಕ್ತಿ" ಪ್ರಶಸ್ತಿ ಗಳಿಸುವ ಸ್ಪರ್ಧಿಯು, ನಂತರದ ಮೂರು ವರ್ಷಗಳು, ಪ್ರದರ್ಶನದ ಮಟ್ಟವನ್ನು ಉಳಿಸಿಕೊ೦ಡಿದ್ದರೆ, ನಾಲ್ಕನೇ ವರ್ಷ, "ಸ್ತ್ರೀ ಕಲಾ ಶಕ್ತಿ ಬೊನಸ್ " ಬಹುಮಾನಕ್ಕೆ ಅರ್ಹರಾಗುತ್ತಾರೆ. ಆ ನಿಯಮದಂತೆ, ಈ ಬಾರಿ, ಸ್ತ್ರೀಶಕ್ತಿ ಶಾಂತಾ ಲಕ್ಷ್ಮೀನಾರಾಯಣ ಮತ್ತು ಶ್ರೀಮತಿ ಶಾಮಲಾ ಪ್ರಸನ್ನ ಅಂತಹ ಬೊನಸ ಬಹುಮಾನ ಗಳಿಸಿದ್ದಾರೆ.


ಶ್ರೀಮತಿ ಶಾಮಲಾ ಪ್ರಸನ್ನ ಅವರು "ಸ್ತ್ರೀ ಕಲಾ ಶಕ್ತಿ" ಪ್ರಶಸ್ತಿ ಪಡೆದ ನಂತರದ ಮೂರು ವರ್ಷಗಳು ಸತತವಾಗಿ "ಪ್ರಶಸ್ತಿ ಪೂರಕ ಪ್ರಥಮ ಬಹುಮಾನ" ಗಳಿಸಿದ್ದು, ಈ ಬಾರಿ "ಸ್ತ್ರೀ ಕಲಾ ಶಕ್ತಿ ಬೋನಸ್ ಬಹುಮಾನ ಗಳಿಸಿ
ಅಭಿನಂದಿತರಾಗಿದ್ದಾರೆ
.


ದಸರಾ ಬೊ೦ಬೆ ಪ್ರದರ್ಶನದಲ್ಲಿ ಸ್ತ್ರೀ ಕಲಾ ಶಕ್ತಿ ಬೋನಸ ಬಹುಮಾನಕ್ಕೆ ಪಾತ್ರರಾದವರು ಸ್ತ್ರೀಶಕ್ತಿ ಶಾಂತಾ ಲಕ್ಷ್ಮೀನಾರಾಯಣ ಅವರು. ಅನಿವಾರ್ಯ ಕಾರಣಗಳಿಂದ ಇವರಿಗೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದೇ, ತಮ್ಮ ಬಹುಮಾನವನ್ನು ಅವರು ಪ್ರತಿಷ್ಠಾನದ ಕಾರ್ಯಾಲಯದಲ್ಲಿ ಪಡೆದುಕೊ೦ಡರು.

ಮುಖ್ಯ ಅತಿಥಿಗಳು ಹಾಗೂ ಉದ್ಘಾಟಕರಿಗೆ ಗೌರವ ಸಮರ್ಪಣೆಃ ಸ್ತ್ರೀಶಕ್ತಿ ಬಿ. ಆರ್ ನಾಗರತ್ನ ಅವರು ಸಮಾರಂಭದ ಉದ್ಘಾಟಕರೂ ಆದ ಗೌರವಾನ್ವಿತ ಮುಖ್ಯ ಅತಿಥಿಗಳಾದ ಪದ್ಮಶ್ರೀ ಡಾ। ವಿ. ಪ್ರಕಾಶ್ ಅವರನ್ನು ಸಭೆಗೆ ಪರಿಚಯಿಸಿದರು. ಡಾ।ಪ್ರಕಾಶ ಅವರು, ಪ್ರತಿಷ್ಠಾನದ ಕಾರ್ಯಚಟುವಟಿಕೆಗಳನ್ನು ಪ್ರಶಂಸಿಸುತ್ತಾ ಉದ್ಘಾಟನಾ ಭಾಷಣದ ಅಂಗವಾಗಿ ಮಾತನಾಡಿದರು. ಮುಂದುವರಿದು ಅವರು ಪ್ರತಿಷ್ಠಾನವು ಇಂತಹ ಹತ್ತು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊ೦ಡು ಕಲಾಸೇವೆ ಮಾಡಲಿ ಏಂದು ತಮ್ಮ ಆಶಯವನ್ನು ವ್ಯಕ್ತಪಡಿಸಿದರು.




ಡಾ। ವಿ. ಪ್ರಕಾಶ್ ಅವರಿಂದ ಉದ್ಘಾಟನಾ ಭಾಷಣ. ನಂತರ ಸ್ತ್ರೀಶಕ್ತಿ ಮಹಿಳಾ ಪ್ರತಿಷ್ಠಾನವು ಡಾ। ಪ್ರಕಾಶ್ ಅವರನ್ನು ಆದರದಿ೦ದ ಅಭಿವಂದಿಸಿ, ಅಭಿನಂದಿಸಿತು.


ವಿಶೇಷ (ಸಾಧನೆ) ಪ್ರಶಸ್ತಿಗಳುಃ
"ಸ್ತ್ರೀ ಗಾಯನ ಗಂಗೆ" ಪ್ರಶಸ್ತಿ (ಸುಗಮ ಸಂಗೀತ ಕ್ಷೇತ್ರದಲ್ಲಿ ಜೀವಮಾನ ಸಾಧನೆ)





ಸ್ತ್ರೀಶಕ್ತಿ ಶಾಂತಾ ಜಗದೀಶ್ ಆವರಿಗೆ ಸುಗಮ ಸಂಗೀತ ಕ್ಷೇತ್ರದಲ್ಲಿ ಜೀವಮಾನ ಸಾಧನೆಗಾಗಿ "ಸ್ತ್ರೀ ಗಾಯನ ಗಂಗೆ" ಪ್ರಶಸ್ತಿ ಪ್ರದಾನ. ಸ್ತ್ರೀಶಕ್ತಿ ಶಾಮಲಾ ಮೂರ್ತಿ ಅವರಿಗೆ ಸಾಹಿತ್ಯ ಕ್ಷೇತ್ರದಲ್ಲಿನ ಅಪ್ರತಿಮ ಸಾಧನೆಗಾಗಿ "ಸ್ತ್ರೀ ಸಾಹಿತ್ಯ ಶಕ್ತಿ" ಪ್ರಶಸ್ತಿ ಪ್ರದಾನ.
ನೆರವು - ಸ್ಮರಣೆ - ಕೃತಜ್ನತೆಃ
ಪ್ರೊ। ಗೋಪಾಲನ ದಂಪತಿಗಳು, ಶ್ರೀ ರಘುನಂದನ ದಂಪತಿಗಳು ಹಾಗೂ ಶ್ರೀ ಕುಮಾರಸ್ವಮಿ ದಂಪತಿಗಳಿಗೆ ನೀಡಿ ಗೌರವ ಸಮರ್ಪಣೆ.



ಪ್ರತಿಷ್ಠಾನದ ಹಿತಚಿಂತಕರೂ, ಅಭಿಮಾನಿಗಲಳೂ ಹಾಗೂ ಪೋಷಕರೂ ಆದ ಸನ್ಮಾನ್ಯ ಶ್ರೀ ಕೇ. ರಘುರಾಂ ಅವರಿಂದ "ಸ್ತ್ರೀ ಕಲಾ ಶಕ್ತಿ ಪ್ರಶಸ್ತಿ ಪೂರಕ ಪ್ರಥಮ ಬಹುಮಾನ" ವಿಜೆತರಿಗೆ ಬಹುಮಾನ ವಿನಿಯೊಗಃ

ಸ್ತ್ರೀಶಕ್ತಿ ಹೇಮಲತಾ ಕುಮಾರಸ್ವಾಮಿ ಅವರಿಗೆ ಪ್ರಶಸ್ತಿ ಪೂರಕ ಪ್ರಥಮ

ಸ್ತ್ರೀಶಕ್ತಿ ಶೋಭಾ ಸತ್ಯನಾರಾಯಣ - ಪ್ರಶಸ್ತಿ ಪೂರಕ ಪ್ರಥಮ

ಸ್ತ್ರೀಶಕ್ತಿ ಸುಮನಾ ರಘುನಂದನ - ಪ್ರಶಸ್ತಿ ಪೂರಕ ಪ್ರಥಮ

ಸ್ತ್ರೀಶಕ್ತಿ ಭಾನುಮತಿ ಸುಂದರೇಶನ - ಪ್ರಶಸ್ತಿ ಪೂರಕ
ಪ್ರಥಮ

ವಿಜಯಕಾಂತಾ - ಪ್ರಶಸ್ತಿ ಪೂರಕ ಪ್ರಥಮ

ಸ್ತ್ರೀಶಕ್ತಿ ಹೆಚ್. ಲೀಲಾವತಿ - ಪ್ರಥಮ ಬಹುಮಾನ


ಶ್ರೀಮತಿ ಮಾಲಿನಿ ಸತ್ಯನಾರಾಯಣ -ಪ್ರಥಮ ಬಹುಮಾನ ಶ್ರೀಮತಿ ಉಮಾ ಪ್ರಸಾದ್


ಶ್ರೀಮತಿ ದಿ. ತಂಗಮಣಿ - ಪ್ರಥಮ


ಶ್ರೀಮತಿ ಜಿ. ರಾಜೇಶ್ವರಿ - ಪ್ರಥಮ ಸ್ತ್ರೀಶಕ್ತಿ ಏನ್. ಮಂಜುಳಾ - ಪ್ರಥಮ
ಇನ್ನು ಮುಂದೆ ಪೂಜ್ಯ ಆಳ್ವಾರ್ ಸ್ವಾಮೀಜಿ ಅವರು ವಿಜೇತರಿಗೆ ದ್ವಿತೀಯ ಬಹುಮಾನ ವಿನಿಯೋಗ
ಮಾಡಿದರು:



ಶ್ರೀಮತಿ ಚಿತ್ರ ಮಧುಸೂಧನ್ - ದ್ವಿತೀಯ ಸ್ತ್ರೀಶಕ್ತಿ ಗಿರಿಜಾ ಶೇಷಾದ್ರಿ - ದ್ವಿತೀಯ


ವೈ. ಸಿ. ವಿಮಲಾ ಬಾಬು - ದ್ವಿತೀಯ ಶ್ರೀಮತಿ ಜಯಶ್ರೀ ಶೇಷಚಲಂ - ದ್ವಿತೀಯ


ಸ್ತ್ರೀಶಕ್ತಿ ಅನ್ನಪೂರ್ಣ ಗೋಪಾಲಕೃಷ್ಣ - ದ್ವಿತೀಯ ಸ್ತ್ರೀಶಕ್ತಿ ಪದ್ಮಾ ರಾಮನಾಥ್ - ದ್ವಿತೀಯ



sthreeshakthi
[









ನಮ್ಮ ಸ್ತ್ರೀಶಕ್ತಿ ಮಹಿಳಾ ಪ್ರತಿಷ್ಟ್ಹಾನವು ೨೦೧೦ ರ ಜನವರಿ ೧೦ ರಂದು ಗಾನಭಾರತಿ ಯಲ್ಲಿ ಹಮ್ಮಿಕೊಂಡಿದ್ದ "೨೦೦೯ ರ ದಸರಾ ಬೊಂಬೆ ಮತ್ತು ಮನೆ ತೋಟದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ "ಸ್ತ್ರೀ ಕಲಾ ಶಕ್ತಿ", "ಸ್ತ್ರೀ ಗಾಯನ ಗಂಗೆ " "ಸ್ತ್ರೀ ಸಾಹಿತ್ಯ ಶಕ್ತಿ" ಪ್ರಶಸ್ತಿ ಪ್ರದಾನ ಹಾಗೂ ಬಹುಮಾನ ವಿನಿಯೋಗ ಸಮಾರಂಭದ ಒಂದು ಸ್ಥೂಲ ಪರಿಚಯ.
ನಮ್ಮ ಎಲ್ಲ ಆತ್ಮೀಯರಿಗೆ, ಹಿತಚಿಂತಕರಿಗೆ ಹಾಗೂ ಉದಾರ ನೆರವು ಹಸ್ತ ನೀದುತ್ತಿರುವವರಿಗೆ ಧನ್ಯವಾದಗಳು ಹಾಗೂ ಶುಭಾಶಯಗಳು.
ಸ್ತ್ರೀಶಕ್ತಿ ಎಸ. ಮಂಗಳಾ ಸತ್ಯನ್
ಅಧ್ಯಕ್ಷರು
ಜಯ ಕರ್ನಾಟಕ
No comments:
Post a Comment